MGNREGA Job Card: ನರೇಗಾ ಜಾಬ್ ಕಾರ್ಡ್ ಇದ್ದರೆ ಸಿಗಲಿವೇ ಈ ಪ್ರಯೋಜನಗಳು

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಕೂಡ ನರೇಗಾ ಜಾಬ್ ಕಾರ್ಡ್ ಪಡೆದುಕೊಳ್ಳಬೇಕೆ..? MGNREGA Job Card ಗೆ ಅರ್ಜಿ ಸಲ್ಲಿಸಿದವರಿಗೆ ಏನೆಲ್ಲಾ ಸೌಲಭ್ಯಗಳು ದೊರೆಯಲಿವೆ..? ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ..? ಹಾಗೂ ಅರ್ಹತೆಗಳೇನು..? ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ, ಜಾಬ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ 1 ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಈ ಯೋಜನೆಯಡಿ ನೀಡಲಾಗುತ್ತದೆ.

ಈ ಯೋಜನೆಯಡಿ, ಕಾರ್ಮಿಕರಿಗೆ ಕೆಲಸಕ್ಕಾಗಿ ಪ್ರತಿದಿನ ವೇತನವನ್ನು ನೀಡಲಾಗುತ್ತದೆ, ಆ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗೂ ಜಾಬ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಯೋಜನೆಯ ಲಾಭ ದೊರೆಯಲಿದೆ.

ನರೇಗಾ ಜಾಬ್ ಕಾರ್ಡ್ (MGNREGA Job Card) ಹೊಂದಿರುವ ಕಾರ್ಮಿಕರಿಗೆ 100 ದಿನಗಳ ಖಾತರಿ ಉದ್ಯೋಗವನ್ನು ಒದಗಿಸಲಾಗುತ್ತದೆ. ಆರ್ಥಿಕವಾಗಿ ದುರ್ಬಲ ಬಡ ಕುಟುಂಬಗಳಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ಜಾಬ್ ಕಾರ್ಡ್ ಗಳನ್ನು ನೀಡಲಾಗುತ್ತದೆ.

ನರೇಗಾ ಜಾಬ್ ಕಾರ್ಡ್ ಗೆ ಅರ್ಹತೆಗಳು:

  • ಅರ್ಜಿದಾರರು ಕನಿಷ್ಠ 18 ವರ್ಷ ಪೂರೈಸಿರಬೇಕು.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
  • ಎಲ್ಲಾ ಜಾತಿ ವರ್ಗದ ನಾಗರಿಕರು ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

MGNREGA Job Card ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್‌
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಗುರುತಿನ ಚೀಟಿ
  • ನಿವಾಸ ಪ್ರಮಾಣಪತ್ರ
  • ಬ್ಯಾಂಕ್ ಪಾಸ್ ಬುಕ್
  • ಪಾಸ್ ಪೋರ್ಟ್ ಗಾತ್ರದ ಪೋಟೋ

ನರೇಗಾ ಜಾಬ್ ಕಾರ್ಡ್’ನ ಪ್ರಯೋಜನಗಳು:

  • 100 ದಿನಗಳ ಖಾತರಿ ಉದ್ಯೋಗವನ್ನು ಪಡೆಯಬಹುದು.
  • 100 ದಿನಗಳ ಉದ್ಯೋಗ ಸಿಗದಿದ್ದರೆ, ನಿಮಗೆ ನಿರುದ್ಯೋಗ ಭತ್ಯೆಯ ಪ್ರಯೋಜನವನ್ನು ಪಡೆಯಬಹುದು.
  • ಈ ಕಾರ್ಡ್ ಹೊಂದಿರುವವರಿಗೆ ಆರೋಗ್ಯ ವಿಮೆಯನ್ನು ಸಹ ನೀಡುತ್ತಾರೆ.
  • ಪಕ್ಕಾ ಮನೆಯಲ್ಲಿ ವಾಸಿಸಲು ನಿಮಗೆ ಪಿಎಂ ಆವಾಸ್ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
  • ದನ, ಕೋಳಿ, ಹಂದಿ, ಮೇಕೆ/ಕುರಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ ಸಹಾಯಧನ ಪಡೆಯಬಹುದು.
  • ಇದರ ಜೊತೆಗೆ, ಇತರ ಎಲ್ಲಾ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.

MGNREGA Job Card ಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಗ್ರಾಮ ಪಂಚಾಯಿತಿ ಕಛೇರಿಗೆ ಹೋಗಿ ನರೇಗಾ ಜಾಬ್ ಕಾರ್ಡ್ ನ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು ಹಾಗೂ ಅರ್ಜಿ ನಮೂನೆಯಲ್ಲಿ ಕೇಳಿರುವ ಮಾಹಿತಿಯನ್ನು ನಮೂದಿಸಬೇಕು. ನಂತರ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಗ್ರಾಮ ಪಂಚಾಯತಿ ಕಚೇರಿಗೆ ಸಲ್ಲಿಸಬೇಕು.

ಇತರೆ ಮಾಹಿತಿಗಳನ್ನು ಓದಿ:

HDFC ಪರಿವರ್ತನ್ ವಿದ್ಯಾರ್ಥಿವೇತ 2024

Leave a Comment

error: Don't Copy