ಎಲ್ಲರಿಗೂ ನಮಸ್ಕಾರ, ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಬಿಗ್ ಶಾಕ್. 10 ಸಾವಿರ BPL ಕಾರ್ಡ್ ರದ್ದು (Ration Card Cancellation). ಈ ಲಿಸ್ಟ್ ನಲ್ಲಿ ನಿಮ್ ಹೆಸರು ಇದೆಯಾ ಎಂದು ಚೆಕ್ ಮಾಡಿಸಿಕೊಳ್ಳಬಹುದು. ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಗಳು ರದ್ದಾಗಿದೆ.
BPL ಕಾರ್ಡ್ ಹೊಂದಿರುವ ಫಲಾನುಭವಿಗಳು ಆದಾಯ ತೆರಿಗೆ ಮತ್ತು ಜಿಎಸ್ಟಿ ಪಾವತಿಸದಿದ್ದರೂ ತಾಂತ್ರಿಕ ಕಾರಣದಿಂದಾಗಿ ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಕುಟುಂಬಗಳ BPL ಕಾರ್ಡ್ ಗಳು (Ration Card Cancellation) ರದ್ದಾಗಿದೆ. ಈ ಕುಟುಂಬಗಳ ಮನೆ ಯಜಮಾನಿಗೆ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯಿಂದಲೂ ಸಹ ವಂಚಿತರಾಗಿದ್ದಾರೆ.
Ration Card Cancellation 2024:
ಬಿಪಿಎಲ್ ಕಾರ್ಡ್ ರದ್ದಾಗಿರುವುದು 10 ಸಾವಿರ ಬಡ ಕುಟುಂಬಗಳಿಗೆ ಬಿಗ್ ಶಾಕ್ ನೀಡಿದೆ. ನಾವು ಐಟಿ, ಮತ್ತು GST ಪಾವತಿದಾರರಲ್ಲ. ಆದರೂ, IT ಮತ್ತು GST ಪಾವತಿದಾರರು ಎಂದು ಗೃಹಲಕ್ಷ್ಮಿ ಹಣವನ್ನು ಪಾವತಿ ಮಾಡುತ್ತಿಲ್ಲ ಎಂದು ಅರ್ಹ ಫಲಾನುಭವಿ ಸಾವಿರಾರು ಮಹಿಳೆಯರು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ಸುಮಾರು 7-8 ತಿಂಗಳಾಗಿದ್ದರೂ, ಇನ್ನು ಕೆಲವರು ಐಟಿ, ಜಿಎಸ್ಟಿ ಪಾವತಿದಾರರಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರೂ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಪಾವತಿಯಾಗುತ್ತಿಲ್ಲ.
ಗೃಹಲಕ್ಷ್ಮೀ ಯೋಜನೆಯ ನಿಯಮಾನುಸಾರ ಆದಾಯ ತೆರಿಗೆ ಮತ್ತು GST ಪಾವತಿದಾರರಿಗೆ ಈ ಯೋಜನೆಯಡಿಯಲ್ಲಿ ಪ್ರಯೋಜನ ದೊರೆಯುವುದಿಲ್ಲ. ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೂ 1.78 ಲಕ್ಷ ಮಹಿಳೆಯರು ಈ ಯೋಜನೆಗೆ ನೋಂದಾಯಿಸಿಕೊಂಡು, 2,000 ರೂ. ಪಡೆಯುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು.
ಈ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತನಿಖೆ ಕೈಗೊಂಡು, ಪರಿಶೀಲನೆ ನಡೆಸಿದಾಗ ಆದಾಯ ತೆರಿಗೆ ಮತ್ತು GST ಪಾವತಿದಾರರಿಗೆ ಈ ಯೋಜನೆಯ ಹಣದ ವರ್ಗಾವಣೆಯನ್ನು ನಿಲ್ಲಿಸಲಾಗಿದೆ. ಹಾಗೂ ದಾಖಲೆ ಪರಿಶೀಲನೆಗೆ ಚಾಲನೆ ನೀಡಲಾಗಿದೆ. ಇ-ಗವರ್ನೆನ್ಸ್ ಇಲಾಖೆಗೆ ತನಿಖೆ ನಡೆಸಲು ಮಹಿಳಾ ಇಲಾಖೆ ಸೂಚಿಸಿದೆ.
ಇತರೆ ಮಾಹಿತಿಗಳನ್ನು ಓದಿ:
New Ration Card: ಹೊಸ ರೇಷನ್ ಕಾರ್ಡ್ಗಾಗಿ ಆನ್ಲೈನ್ ಅರ್ಜಿ ಆಹ್ವಾನ
MGNREGA Job Card: ನರೇಗಾ ಜಾಬ್ ಕಾರ್ಡ್ ಇದ್ದರೆ ಸಿಗಲಿವೇ ಈ ಪ್ರಯೋಜನಗಳು