APAAR ID Card: ವಿದ್ಯಾರ್ಥಿಗಳಿಗೆ ಹೊಸ ಆಧಾರ್‌ ಕಾರ್ಡ್‌; ಏಕರೂಪದ ವಿದ್ಯಾರ್ಥಿ ಗುರುತಿನ ಚೀಟಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢ ಮತ್ತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ‘ಆಧಾರ್‌’ ಸಂಖ್ಯೆಯ ಮಾದರಿಯಲ್ಲಿ 12 ಅಂಕಿಯ ‘ಅಪಾರ್’ ವಿಶಿಷ್ಟ ಗುರುತಿನ ಚೀಟಿ (APAAR ID Card) ವಿತರಿಸಲು ಸಿದ್ದತೆ ನಡೆಸಲಾಗುತ್ತಿದೆ.

ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಏಕರೂಪದ ಗುರುತಿನ ಚೀಟಿ ನೀಡಲು ‘ಒಂದು ದೇಶ, ಏಕರೂಪದ ವಿದ್ಯಾರ್ಥಿ ಗುರುತಿನ ಚೀಟಿ’ ಶಿಫಾರಸು ಮಾಡಲಾಗಿತ್ತು. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ‘ಅಪಾರ್’ ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತದೆ.

ಅಪಾರ್ ಗುರುತಿನ ಚೀಟಿಗೆ ವಿದ್ಯಾರ್ಥಿಗಳ ಹೆಸರು ನೋಂದಣಿಗೂ ಮೊದಲು ಅವರ ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಪೋಷಕರ ಆಧಾರ್, ವೋಟರ್ ಐ.ಡಿ, ಡ್ರೈವಿಂಗ್‌ ಲೈಸನ್ಸ್‌ ಲಿಂಕ್ ಮಾಡಿ ವಿದ್ಯಾರ್ಥಿಗಳ ID ಸೃಷ್ಟಿಸಲಾಗುತ್ತದೆ.

ವಿದ್ಯಾರ್ಥಿಗಳ ಹೆಸರು ನೋಂದಾಯಿ ಸಲು ಶಿಕ್ಷಣ ಇಲಾಖೆ ಆದೇಶ ಹೊರಡಿ ಸಿದ್ದು, ಮುಖ್ಯ ಶಿಕ್ಷಕರು ಪೋಷಕರ ಸಭೆ ಕರೆದು ಅವರ ಒಪ್ಪಿಗೆ ಪಡೆಯುವಂತೆ ಸೂಚಿಸಿದೆ.

ಈಗಾಗಲೇ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ.

APAAR ID Card ಎಂದರೆ ಏನು?:

‘ಅಪಾರ್’ ಎಂದರೆ ಇದು ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ (APAAR-Automatic Permanent Academic Account Registry) ಸಂಕ್ಷಿಪ್ತ ರೂಪವಾಗಿದೆ.

ಆಧಾರ್ ಕಾರ್ಡ್‌ ಪರಿಕಲ್ಪನೆಯೇ ಇದಕ್ಕೆ ಪ್ರೇರಣೆಯಾಗಿದ್ದು, ಆಧಾರ್‌ ಮಾದರಿ ಅಂತೆಯೇ ವಿದ್ಯಾರ್ಥಿಗಳಿಗೂ 12 ಅಂಕಿಗಳ ವಿಶಿಷ್ಟ ಗುರುತಿನ ಗುರುತಿನ ಚೀಟಿಯನ್ನು ನೀಡಲಾಗುವುದು. ಇದು ವಿದ್ಯಾರ್ಥಿ ಜೀವಮಾನದ ಗುರುತಿನ ಸಂಖ್ಯೆಯಾಗಿರುತ್ತದೆ.

APAAR ID ಕಾರ್ಡ್ ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣವನ್ನು ಮತ್ತು ಸಾಧನೆಗಳನ್ನು ಟ್ರ್ಯಾಕ್ ಮಾಡಲು ಮತ್ತು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ವರ್ಗಾವಣೆಯನ್ನು ಸುಲಭಗೊಳಿಸುತ್ತದೆ. ಶಾಲಾ-ಕಾಲೇಜುಗಳು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ದಾಖಲಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಈ ಕಾರ್ಡ್ ಅನ್ನು ನೀಡುತ್ತವೆ.

ಇತರೆ ಮಾಹಿತಿಗಳನ್ನು ಓದಿ:

HDFC ಪರಿವರ್ತನ್ ವಿದ್ಯಾರ್ಥಿವೇತ 2024

SBI Scholarship 2024

SSP Post Matric Scholarship 2024

Leave a Comment

error: Don't Copy