ಎಲ್ಲರಿಗೂ ನಮಸ್ಕಾರ, ಹೊಸ ವರ್ಷ ಆರಂಭಕ್ಕೆ ಇನ್ನೇನು ಕೆಲವೆ ದಿನಗಳು ಬಾಕಿ ಇವೆ. ಹೊಸ ವರ್ಷದಲ್ಲಿ ಎಷ್ಟು ರಜಾ ದಿನಗಳು (Holiday List 2025) ಬರಲಿವೆ ಎಂದು ತಿಳಿದುಕೊಳ್ಳಬೇಕೆ..? ಸಾರ್ವತ್ರಿಕ ರಜಾ ದಿನಗಳೇಷ್ಟು ಹಾಗೂ ಪರಿಮಿತ ರಜಾ ದಿನಗಳೇಷ್ಟಿವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ರಜೆ ಅಂದರೆ ಎಲ್ಲರಿಗೂ ಇಷ್ಟಾ. ರಜಾ ದಿನಗಳಲ್ಲಿ ಕುಟುಂಬದ ಜೊತೆಯಲ್ಲಿ ಕಾಲ ಕಳೆಯಲು ಇಷ್ಟಪಡುತ್ತಾರೆ. ಹಾಗೆ ಇನ್ನು ಕೆಲವರು ಎಲ್ಲಿಯಾದರೂ ಹೊಸ ಜಾಗಕ್ಕೆ ಭೇಟಿ ನೀಡಬೇಕೆಂದು ಕಾಯುತಿರುತ್ತಾರೆ. ಹೀಗೆ ಅವರಿಗೆ ಇಷ್ಟ ಬಂದಂತೆ ರಜೆಯ ಖುಷಿಯನ್ನು ಅನುಭವಿಸುತ್ತಾರೆ.
ರಾಜ್ಯ ಸರ್ಕಾರ 2025 ನೇ ಸಾಲಿನ ಸರ್ಕಾರಿ ರಜೆಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನವೆಂಬರ್ 14 ರಂದು ನಡೆದ ಸಚಿವ ಸಂಪುಟ ಸಭೆಯ ಒಪ್ಪಿಗೆಯ ನಂತರ 2025 ರ ಸಾರ್ವತ್ರಿಕ ಮತ್ತು ಪರಿಮಿತ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 19 ಸಾರ್ವತ್ರಿಕ ರಜೆಗಳು ಹಾಗೂ 20 ಪರಿಮಿತ ರಜೆಗಳಿವೆ.
Karnataka Govt Holiday List 2025: ಸಾರ್ವತ್ರಿಕ ರಜಾ ದಿನಗಳ ಪಟ್ಟಿ:
14-01-2025 – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
26-02-2025 – ಮಹಾ ಶಿವರಾತ್ರಿ
31-03-2025 – ಖುತುಬ್- ಎ-ರಂಜಾನ್
10-04-2025 – ಮಹಾವೀರ ಜಯಂತಿ
14-04-2025 – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
18-04-2025 – ಗುಡ್ ಫ್ರೈಡೆ
30-04-2025 – ಬಸವ ಜಯಂತಿ, ಅಕ್ಷಯ ತೃತೀಯ
01-05-2025 – ಕಾರ್ಮಿಕ ದಿನಾಚರಣೆ
07-06-2025 – ಬಕ್ರೀದ್
15-08-2025 – ಸ್ವಾತಂತ್ರ್ಯ ದಿನಾಚರಣೆ
27-08-2025 – ವರಸಿದ್ದಿ ವಿನಾಯಕ ವ್ರತ
05-09-2025 – ಈದ್ ಮಿಲಾದ್
01-10-2025 – ಮಹಾನವಮಿ, ಆಯುಧಪೂಜೆ, ವಿಜಯದಶಮಿ
02-10-2025 – ಗಾಂಧಿ ಜಯಂತಿ
07-10-2025 – ಮಹರ್ಷಿ ವಾಲ್ಮೀಕಿ ಜಯಂತಿ
20-10-2025 – ನರಕ ಚತುರ್ದಶಿ
22-10-2025 – ಬಲಿಪಾಡ್ಯಮಿ, ದೀಪಾವಳಿ
01-11-2025 – ಕನ್ನಡ ರಾಜ್ಯೋತ್ಸವ
25-12-2025 – ಕ್ರಿಸ್ ಮಸ್
Holiday List 2025: ಪರಿಮಿತಿ ರಜಾ ದಿನಗಳ ಪಟ್ಟಿ:
01-01-2025 – ಹೊಸ ವರ್ಷಾರಂಭ
06-02-2025 – ಮಧ್ಯ ನವಮಿ
14-02-2025 – ಷಬ್-ಎ-ಬರಾತ್
13-03-2025 – ಹೋಳಿ ಹಬ್ಬ
27-03-2025 – ಷಬ್-ಎ-ಖಾದರ್
28-03-2025 – ಜುಮತ್- ಉಲ್ ವಿದಾ
02-04-2025 – ದೇವರ ದಾಸಿಮಯ್ಯ ಜಯಂತಿ
19-04-2025 – ಹೋಲಿ ಸ್ಯಾಟರ್ ಡೇ
02-05-2025 – ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ ಜಯಂತಿ
12-05-2025 – ಬುದ್ದ ಪೂರ್ಣಿಮ
08-08-2025 – ಶ್ರೀ ವರಮಹಾಲಕ್ಷ್ಮಿ ವ್ರತ
16-08-2025 – ಶ್ರೀ ಕೃಷ್ಣ ಜನ್ಮಾಷ್ಠಮಿ
26-08-2025 – ಸ್ವರ್ಣ ಗೌರಿ ವ್ರತವ್ರತ
06-09-2025 – ಶ್ರೀ ಅನಂತಪದ್ಮನಾಭ ವ್ರಜಯಂತಿ
08-09-2025 – ಕನ್ಯಾ ಮರಿಯಮ್ಮ ಜಯಂತಿ
17-09-2025 -ವಿಶ್ವಕರ್ಮ ಜಯಂತಿ
18-10-2025 – ತುಲಾ ಸಂಕ್ರಮಣ
05-11-2025 – ಗುರು ನಾನಕ್ ಜಯಂತಿ
05-12-2025 – ಹುತ್ತರಿ ಹಬ್ಬ
24-12-2025 – ಕ್ರಿಸ್ ಮಸ್ ಈವ್
ಇತರೆ ಮಾಹಿತಿಗಳನ್ನು ಓದಿ:
New Ration Card: ಹೊಸ ರೇಷನ್ ಕಾರ್ಡ್‌ಗಾಗಿ ಆನ್‌ಲೈನ್ ಅರ್ಜಿ ಆಹ್ವಾನ