ಎಲ್ಲರಿಗೂ ನಮಸ್ಕಾರ, ನೀವು ಕೂಡ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಅಡಿಯಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಬೇಕೆ..? Raitha Suraksha PMFBY Scheme ಅರ್ಜಿ ಸಲ್ಲಿಸುವುದು ಹೇಗೆ..? ಅರ್ಜಿ ಸಲ್ಲಿಕೆಗೆ ಯಾವ ಯಾವ ದಾಖಲೆಗಳು ಬೇಕಾಗುತ್ತವೆ..? ಹಾಗೂ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಪ್ರಕೃತಿ ಸೇರಿದಂತೆ ಮುಂತಾದ ವಿಕೋಪಗಳಿಂದ ರೈತರು ಬೆಳೆದಿರುವ ಬೆಳೆಗಳು ಸರಿಯಾಗಿ ಬರದೆ ರೈತರು ನಷ್ಟ ಅನುಭವಿಸುವಂತಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ವಿಮೆಯ ಮೊತ್ತವು ರೈತರಿಗೆ ಸಹಾಯವಾಗುತ್ತದೆ. ರೈತರು ಫಸಲ್ ಬೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಬಹುದು.
2024-25 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ (PMFBY Crop Insurance Scheme) ಯ ಬೆಳೆ ವಿಮೆಯ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅತಿವೃಷ್ಟಿ, ಅನಾವೃಷ್ಟಿ, ಸೇರಿದಂತೆ ಹಲವಾರು ಕಾರಣಗಳಿಂದ ರೈತರಿಗೆ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
Karnataka Raitha Suraksha PMFBY Scheme Application Last 2024:
ಹಿಂಗಾರು ಬೆಳೆವಾರು ಕೊನೆಯ ದಿನಾಂಕಗಳು
ಜೋಳ (ನೀರಾವರಿ) – 15-11-2024
ಜೋಳ (ಮಳೆ ಆಶ್ರಿತ) – 15-11-2024
ಮುಸುಕಿನ ಜೋಳ (ನೀರಾವರಿ) – 30-11-2024
ಮುಸುಕಿನ ಜೋಳ (ಮಳೆ ಆಶ್ರಿತ) – 15-11-2024
ಗೋಧಿ (ನೀರಾವರಿ) – 16-12-2024
ಗೋಧಿ (ಮಳೆ ಆಶ್ರಿತ) – 16-12-2024
ಕಡಲೆ (ನೀರಾವರಿ) – 16-12-2024
ಕಡಲೆ (ಮಳೆ ಆಶ್ರಿತ) – 30-11-2024
ಹುರುಳಿ (ಮಳೆ ಆಶ್ರಿತ) – 15-11-2024
ಅಗಸೆ (ಮಳೆ ಆಶ್ರಿತ) – 15-11-2024
ಸೂರ್ಯಕಾಂತಿ (ನೀರಾವರಿ) – 30-11-2024
ಸೂರ್ಯಕಾಂತಿ (ಮಳೆ ಆಶ್ರಿತ) – 15-11-2024
ಕುಸುಬೆ (ಮಳೆ ಆಶ್ರಿತ) – 15-11-2024
2024-25 ಸಾಲಿನ ಬೇಸಿಗೆ ಬೆಳೆಗಳು ಹಾಗೂ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
ಭತ್ತ (ನೀರಾವರಿ) – 28-02-2025
ಸೂರ್ಯಕಾಂತಿ (ನೀರಾವರಿ) – 28-02-2025
ನೆಲಗಡಲೆ (ಶೇಂಗಾ) – 28-02-2025
PMFBY Scheme ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಜಮೀನಿನ ಪಹಣಿ/ ಉತಾರ್/RTC
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ರೈತರು ನೋಂದಣಿಗಾಗಿ ಕಡ್ಡಾಯವಾಗಿ FRUITS ID (FID) ಹೊಂದಿರಬೇಕು.
Crop Insurance Scheme ಅರ್ಜಿ ಸಲ್ಲಿಸುವುದು ಹೇಗೆ..?
ಅರ್ಜಿ ಸಲ್ಲಿಸಲು ಬಯಸುವ ರೈತರು ತಮ್ಮ ಹತ್ತಿರದ CSC ಕೇಂದ್ರ ಅಥವಾ ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇತರೆ ಮಾಹಿತಿಗಳನ್ನು ಓದಿ:
New Ration Card: ಹೊಸ ರೇಷನ್ ಕಾರ್ಡ್ಗಾಗಿ ಆನ್ಲೈನ್ ಅರ್ಜಿ ಆಹ್ವಾನ
MGNREGA Job Card: ನರೇಗಾ ಜಾಬ್ ಕಾರ್ಡ್ ಇದ್ದರೆ ಸಿಗಲಿವೇ ಈ ಪ್ರಯೋಜನಗಳು